Saturday, May 20, 2017

ಸವಿಯದ ನೆನಪುಗಳು

ನೀ.... ಬಿಟ್ಟು ಹೋದ ನೆನಪುಗಳು
ವಿರಹದೊಲೆಯ ಮೇಲಿಟ್ಟ ಹಾಲಿನ
ಗಿಂಡಿಯಂತಾಗಿದೆ...
ವಿರಹದುರಿಗೆ ಕುದ್ದು ಕುದ್ದು ಅನುಕ್ಷಣವು
ನಿಲ್ಲದೆ... ಉಕ್ಕುತಿದೆ...
ಸಮಾಧಾನದ ನೀರನ್ನು ಎಷ್ಟು ಚಿಮುಕಿಸಿದರೂ...
ಉಕ್ಕುವುದು ಮಾತ್ರ ನಿಲ್ಲುತ್ತಿಲ್ಲ..
ಸಾಲದ್ದಕ್ಕೆ... ಕಣ್ಣ ಹನಿಗಳು ಕೂಡಿ
ಹಾಲಿನ ಗಿಂಡಿಯನು ಉಪ್ಪಾಗಿಸಿಬಿಟ್ಟಿವೆ..
ನಿನ್ನ ನೆನಪುಗಳನ್ನು ಸವಿಯಲು...
ಬಾರದಂತೆ

No comments:

Post a Comment