ಬೇಗ... ಬೇಗ ಬಾರೊ..
ತಮ್ಮಯ್ಯ..
ಅವ್ವಯ್ಯ ಬರುವ ಒತ್ತಾಯ್ತು
ನೋಡಿದರೆ ನಮ್ಮಿಬ್ಬರ... ಈ
ಧಿರಿಸಿನಲ್ಲಿ... ಬೆನ್ನಿಗೆ ಬಾಸುಂಡೆಯೆ
ಉಣ್ಣಿಸಬೇಕಾದಿತು... ಬಾರೊ ಬೇಗ... ಬೇಗ
ಈ ಮಳೆ ಬರುವ ಹೊತ್ತಿನಲ್ಲಿ...
ತಣ್ಣೀರ ಜಳಕ.. ಹಸಿ ಹಸಿ ಬಟ್ಟೆಗಳು
ತಣ್ಣನೆ ಗಾಳಿಗೆ ಮೈಯಲ್ಲ ನಡುಕ..
ಶೀತ ಬಂದರೆ... ಕಲ್ಲಜ್ಜನ ಕಹಿ...
ಕಷಾಯ... ವಾಸಿಯಾಗದಿದ್ದರೆ..
ಪೇಟೆಯ ಡಾಕ್ಟರ್ ನ ಸೂಜಿ... ಯವ್ವಾ..
ಅದನ್ನ ನೆನಸಕೊಂಡ್ರೆ ಭಯಾ ಕಣ್ಲಾ..
ಬಾ..ರ್ಲಾ ಜೋರು ಜೋರಾಗಿ..ಹೆಜ್ಜೆ ಹಾಕ್ಕೊಂಡು
ಮನೆಯಲ್ಲಿ.. ಅಜ್ಜಿಯೊಬ್ಳೆ ಇದ್ರೆ..
ಹಂಚಿನಲಿ ಕೆಂಡ ಹಾಕಿ... ಅಂಗೈ.. ಅಂಗಾಲು
ಕಾಯಿಸಿ.. ನೆತ್ತಿಯ ಹಿತವಾಗಿ ತಿಕ್ಕಿ...
ಮೈತುಂಬ ಬೆಚ್ಚಗಿನ ಬಟ್ಟೆಯ ಹಾಕುವಳು.
ಅಟ್ಟದ ಮ್ಯಾಲಿನ ಡಬ್ಬಿಯಿಂದ... ಮೊನ್ನೆ ಸಂತೆಲಿ ತಂದ
ಚೆಕ್ಕಲಿ.. ಕೊಡ್ಬಳೆಗಳ ಕೈ ತುಂಬಾ ಕೊಡುವಳು..
ಆಲದ ಮರದ ಕಟ್ಟೆಯ ಮೇಲೆ ಕುಳಿತು..
ಕಮ್ಲಿ.. ಲಕ್ಷ್ಮೀ...ಸೂಜಿ ಎಲ್ಲರಿಗೂ ತೋರಿಸಿ
ಅವರ ಬಾಯಲ್ಲಿ ನೀರುರಿಸುತ್ತಾ ತಿನ್ನಬೇಕೂ..
ನೀ ಬಾರ್ಲಾ ಬೇಗ ಬೇಗ ಅವ್ವಯ್ಯ ಬರೊ..
ಹೊತ್ತಾಯ್ತು..
No comments:
Post a Comment