Saturday, May 6, 2017

ಕದನ ಜ ೨

ನೀನು ಒಬ್ಬ ಒಳ್ಳೆಯ ಕ್ರಿಕೆಟ್ ಪ್ಲೇಯರ್ ಅಂತ ಗೊತ್ತಿತ್ತು..
ನನ್ನ ಜೀವನೇ  ನಿನ್ನ
ಆಟದ ಮೈದಾನ ಅಂತ ಗೊತ್ತಿರಲಿಲ್ಲ..
ನಿನೋಬ್ಬ ಒಳ್ಳೆ ಬೌಲರ್ ಅಂತ ಗೊತ್ತಿತ್ತು.
ನನ್ನ ಹೃದಯ ನಿನ್ನ ಬಾಲು ಅಂತ ಗೊತ್ತಿರಲಿಲ್ಲ..
ನಿನೋಬ್ಬ ಒಳ್ಳೆಯ ಬ್ಯಾಟ್ಸ್ ಮ್ಯಾನ್ ಅಂತ ಗೊತ್ತಿತ್ತು..
ನನ್ನ ಹೃದಯ ಒಡೆದು  ಚೂರು ಚೂರಾಗಿ
ಮಾಡ್ತಿಯ ಅಂತ ಗೊತ್ತಿರಲಿಲ್ಲ..
ನಿನು ಚಾಲೆಂಜ್ ಮಾಡಿದರೆ ಗೆಲ್ಲುತ್ತಿಯ ಅಂತ ಗೊತ್ತಿತ್ತು..
ನನ್ನ ಜೀವನದ ಮೈದಾನದಲ್ಲಿ ಆಡಿ ಚಾಲೆಂಜ್
ಗೆಲ್ಲುತ್ತಿಯ ಅಂತ ಗೊತ್ತಿರಲಿಲ್ಲ..
ಆಟ ಗೆದ್ದು ಗೆಳೆಯರ ಜೊತೆ ಪಾರ್ಟಿ ಮಾಡುತ್ತಿಯ ಅಂತ ಗೊತ್ತಿತ್ತು..
ನನ್ನ ಸಮಾಧಿಯ ಮೇಲೆ ಪಾರ್ಟಿ ಮಾಡ್ತಿಯ ಅಂತ
ಗೊತ್ತಿರಲಿಲ್ಲ..
ನಿನಗೆ ಕ್ರಿಕೆಟ್ ಮತ್ತು ನನ್ನ ಜೀವನ ಒಂದೇ
ಹಾಗಿತ್ತು ಅಂತ ಇಂದು ಅರಿತೆ ನೋಡು...
                          #  ಜಯ #


ನೀನೊಳ್ಳೆ ಮನೆಯೊಡತಿ ಅಂತ ಗೊತ್ತಿತ್ತು
ನನ್ನ  ಬದುಕೆ ನಿನ್ನ
ಅಡುಗೆಯ ಮನೆಯಂತ ಗೊತ್ತಾಗಲಿಲ್ಲ..
ನಿನೊಳ್ಳೆ ಸಾರು ಮಾಡುತ್ತಿಯ ಅಂತಾ ಗೊತ್ತು
ನನ್ನ ಹೃದಯವನ್ನು ಮಸಾಲೆ ಹಾಗೆ ರುಬ್ಬುತ್ತಿಯಾ
ಅಂತ ಗೊತ್ತಿರಲಿಲ್ಲ..
ನಿನೊಳ್ಳೆ ಅನ್ನವನ್ನು ಮಾಡುತ್ತಿಯ ಅಂತ ಗೊತ್ತಿತ್ತು
ನನ್ನ ಕನಸುಗಳನ್ನೆಲ್ಲ ಕೊತ ಕೊತ ಕುದಿಸಿ ಸುಟ್ಟು ಕರಕಲಾಗುವಂತೆ ಮಾಡುವೆಯೆಂದು ಅರಿತಿರಲಿಲ್ಲ..
ನಿನೊಬ್ಬಳು ಛಲಗಾತಿ ಹಿಡದ ಕೆಲಸವ ಸಾಧಿಸದೆ ಬಿಡುವವಳಲ್ಲ..
ನನ್ನ ಬದುಕನ್ನೆ ಗುಡಿಸಿ ಸಾರಿಸಿ, ಮೂಲೆಗೆ ದಬ್ಬಿ
ನಿನ್ನ ಗೆಳತಿಯರೊಂದಿಗೆ ಚಾಪೆ ಹಾಸಿಕೊಂಡು ವಿಜಯೋತ್ಸವವ ಆಚರಿಸಿಕೊಳ್ಳುವವಳೆಂದು
ನಾನೆಂದುಕೊಂಡಿರಲಿಲ್ಲ..
ನಿನಗೆ ಅಡುಗೆ ಮನೆ ಮತ್ತು ನನ್ನ ಬದುಕು
ಎರಡು ಒಂದೇ ಆಗಿದ್ದು...  ಈ ಕ್ಷಣ ಅರಿವಾಯಿತು
ನೋಡು..

ಹೀಗೆ ಮರಳು ಮಾಡಿ ಮಾಡಿ
ಮಾಡಿದ್ದು ನನ್ನ ಆಟದ ಮೈದಾನ
ಆಡಿದ್ದು ನನ್ನ ಹೃದಯ ಜೊತೆಗೆ

ಕೊನೆಯಲ್ಲಿ ಗೆದ್ದವ ನೀನು
ಸೋತವಳು ನಾನು

ಗೆದ್ದು ಸಂಭ್ರಮ ಪಟ್ಟೆ
ಸೋತು ಸತ್ತೆ..


ಹಾಗೇನೆ... ರುಚಿ ರುಚಿ
ರುಚಿಯಾಗಿ ಮಾಡಿದ್ದು ನನ್ನನು ಅಡುಗೆ
ಮನೆಯನ್ನಾಗಿ ಮಾಡಿ ಬೆಯಿಸಿದ್ದು
ನನ್ನ ಹೃದಯವನ್ನ..

ಮನದ ಮನೆಯಲ್ಲಿ ಗೆದ್ದವಳು
ನೀನು..
ಅಳಿದದ್ದು ನಾನು..

ಮನದ ಬೇಯಿಸಿದಡುಗೆಯ
ಸವಿಯ ನೀನುಂಡೆ..
ನೀ ಬಡಿಸಿದ ಬದುಕಿನ ಹುಳಿ
ಸಾರ ನಾ ಸವಿದೆ..


ನಾ ಮೊದಲೆ ಹೇಳಿದ್ದೆ
ನಾನು ಅಡುಗೆ ಮಾಡುವಳು ಎಂದು..

ನಿನ್ನಲ್ಲಿಯ ತಪ್ಪುಗಳನ್ನು
ಹಿಡಿದು ಅದಕ್ಕೆ ಮಾಸಾಲೆ ಹಾಕಿ
ರುಬ್ಬಿ ರುಚಿಕರ ಸಾಂಬಾರು ಮಾಡಿ ಬಿಡುವೇ ಎಂದು..

ನೀ ಮಾಡಿದ್ದು ಸರಿಯೆ
ನನ್ನ ಮರಳು ಮಾಡಿ. ಆಟದ ಮೈದಾನ ಮಾಡಿ..

ಗೆಳತಿಯರ ಜೊತೆ ಸೇರಿ ಆಟ ಆಡಿದ್ದು ಸರಿಯೇ..

ನಿನೊಬ್ಬ ಚತುರ ಬುದ್ದಿಶಾಲಿ ಅಂತ ತಿಳಿ ದೆ..

ಒಳ್ಳೆಯ ಗುಣ ನಡತೆ ಇರುವವನು
ಯಾವ ಹೃದಯ ಬಂದರು ನನ್ನ
ಹೃದಯ ಹೊಡೆಯದ ಒಡೆಯ ಆಗುವೆ ಎಂದು..

ನಿ ನಿನ್ನ ಗೆಳತಿಯರ ಸಂಗ ಸೇರಿ
ನನ್ನ ಜೀವನದ ಮೈದಾನದಲ್ಲಿ
ಆಡಿದಕ್ಕೆ..

ನಿ ಮಾಡಿದ್ದು  ಸರಿಯೇ
ನಿನ್ನ ಮಸಾಲ ರುಬ್ಬಿ ಸಂಬಾರು ಮಾಡಿ.
ನಿನ್ನ ಗೆಳೆಯತಿರಿಗೆ  ಊಟಬಡಿಸಿರುವೆ ನೋಡು..


ಅದಕ್ಕೆ ತಾನೆ ನಾನು ನಿನ್ನನು ಮೆಚ್ಚಿಕೊಂಡದ್ದು
ನನ್ನೆಲ್ಲ ಕೆಟ್ಟ ನಡತೆಗಳ ಆರಿಸಿ ರುಬ್ಬಿ.. ಸಾಂಬಾರು
ಮಾಡುವದ ಬಿಟ್ಟು... ನಿನ್ನನ್ನೆ ನಂಬಿದ ಈ
ಹೃದಯವನ್ನು ಜಜ್ಜಿ ಸಾರು ಮಾಡಿಬಿಟ್ಟೆಯಲ್ಲ
ಎಲ್ಲಿ ಹೋಗಿತ್ತು ನಿನ್ನ ಮತಿ...
ಆ ನಿನ್ನ ಮನಸ್ಸೆನು ಊರ ಹರಟೆಗೆ
ಹೋಗಿತ್ತೇನು?

ಆಟದಲ್ಲಿ ಸಾಕಷ್ಟು ಸಲ ಕೆಟ್ಟ ಹೊಡೆತಕ್ಕೆ ಕೈ ಹಾಕಿ
ಶೂನ್ಯಕ್ಕೆ ಔಟಾಗಿದ್ದರೂ.. ನಾಯಕ ನನ್ನ ತಂಡದಿಂದ
ಹೊರದಬ್ಬಿರಲಿಲ್ಲ..
ಯಾಕ್ಹೇಳು ಅವನಿಗೆ ನನ್ನ ಮೇಲೆ ನನ್ನಾಟದ
ಮೇಲೆ ಭರವಸೆಯಿತ್ತು..
ಕೆಟ್ಟ ಹೊಡೆತಗಳಿಗೆ ಕೈ ಹಾಕದಂತೆ
ಮಾರ್ಗದರ್ಶಕನಾಗಿ ತಿದ್ದುತ್ತಿದ್ದನು

ಬದುಕಲ್ಲೇನಾಯಿತು ನೋಡು...
ನನ್ನ ಮನಸಿನ ನಾಯಕಿಯನ್ನಾಗಿ ನಿನ್ನನು
ಆರಿಸಿಕೊಂಡೆ..
ಬದುಕಲಿ ತೆಗೆದುಕೊಳ್ಳುವ ತಪ್ಪು ನಿರ್ಧಾರಗಳಿಗೆ
ನಿನೊಬ್ಬಳು ದಾರಿಸೂಚಿಯಾಗುತ್ತಿಯಾ ಎಂದು
ನನ್ನೆಲ್ಲ ತಪ್ಪುಗಳ ತಿದ್ದಿ ಮರಳಿ ಸರಿ ದಾರಿಗೆ ತರುವದ
ಬಿಟ್ಟು....
ನಿನ್ನೆಲ್ಲ ಗೆಳತಿಯರೊಂದಿಗೆ ಕೂಡಿ ನನ್ನನು
ಇನ್ನಷ್ಟು ಕೆಡಿಸಿಬಿಟ್ಟೆ...
ಬದುಕಲಿ ಬರುವ ನೋವು ನಲಿವುಗಳ
ಬೌನ್ಸರ್ ಸಂದರ್ಭಗಳ ಎದುರಿಸದ ಹಾಗೆ
ಮಾಡಿಬಿಟ್ಟೆ..


ಮೆಚ್ಚಿದರೆ ಸಾಲದು ಗೆಳೆಯ
ಮೊದಲ ನೀ ಆಡುವುದು
ನಿಲ್ಲಿಸು..

ಅ ನಿನ್ನ ಸುತ್ತಮುತ್ತ ಇರುವ ನಲ್ಲೆಯರ.
ಜೊತೆ ಈ ಆಟ
ಆಮೇಲೆ ಹೇಳು ನಾ ಕೇಳುವೆ
ನಿ ನನ್ನ ಈ ಮರಳು ಮಾತುಗಳನ್ನು


ಆ ಕಣ್ಣಿಗೆ ಕಟ್ಟಿರುವ ಪೊರೆಯನೊಮ್ಮೆ
ಹರೆದು ನೋಡು..
ನಾನೊಬ್ಬ ಆಟಗಾರ... ನನ್ನ ಆಟದ ಮೆಚ್ಚುಗೆಗೆ
ಸುತ್ತುವವರೆದಿಷ್ಟಿಲ್ಲ ಬೆಡಗಿಯರು...
ಅದು ಅವರ ಅಭಿಮಾನ.. ಏಕೆ ಮದುವೆಗೂ
ಮೊದಲು ನೀನು ಹೀಗೆ ಸುತ್ತುತ್ತಿರಲಿಲ್ಲವೆ...

ನಾನಲ್ಲ ಮಾತಿನಲ್ಲೆ ಮರಳು
ಮಾಡುವ ಮಾಟಗಾರ...
ನಾನೊಬ್ಬ ಆಟಗಾರ..
ಮರಳಿ ಮರಳಿ ಅರಳು
ಮರಳು ಮಾಡುವ ಕಲೆ
ನಿನಗೊಬ್ಬಳಿಗೆ ಗೊತ್ತು..
ಇಲ್ಲದಿದ್ದರೆ ಅಷ್ಟೂ...
ಸುಂದರಿಯರ ತೊರೆದು
ನಿನ್ನ ನಗುವಿಗೆ ಸೋಲುತ್ತಿದ್ದೇನೆ
ನನ್ನ ಮನದರಸಿಯನ್ನಾಗಿ
ಮಾಡಿಕೊಳ್ಳದೆ...
ಇರುತ್ತಿದ್ದೇನೆ.

ಹಹಹಹ
ಆಟಗಾರ ಮದುವೆಯ
ಮುಂಚೆಯೇ ನಿ ನನ್ನ ಹಿಂದೆ
ಸುತ್ತಿದ್ದು ಮರೆತು ಹೋಯಿತೆ..

ಗಂಟೆ ಗಂಟಲೇ ಮಾತಾಡಿ
ನನ್ನ ಒಪ್ಪಿಸಲು ಕರೆನ್ಸಿ
ಖಾಲಿ ಮಾಡಿದ್ದು ಮರೆತು ಹೋಯಿತೆ..

ಎಂತಹ ಸುಂದರವಾದ ಸುಳ್ಳು
ನಾ ನಿಮ್ಮ ಹಿಂದೆ ಬಂದಿಲ್ಲ ಗೆಳೆಯ
ನಿ ಬಂದೆ ನನ್ನ ಹಿಂದೆ...

ಈ ನಿನ್ನ ಗೆಳಯತಿಯರು
ಮಾಯಾಂಗಣಿಯರು
ನಿನ್ನ ಮೇಲೆ ಮಾಯಾ ಮಾಡಿ ನಿನ್ನ ಹಿಂದೆ ಸುತ್ತುತ್ತಿರುವವರು..


ನಿನ್ನ ನಗುವ ಮೋಹದ
ಬಲೆಯಲ್ಲಿ ಬಿದ್ದ ನನಗೆ
ಇನ್ನೂ ನಿನ್ನ ಹಿಂದೆ ಸುತ್ತುವಂತೆ
ಮಾಡಿದ್ದು ಯಾರಾದರೂ...
ಊಹಿಸಿಕೊಳ್ಳುತ್ತಾರೆ.

ನಿನಗಾಗಿ... ಕೇವಲ ಆ ನಗು
ಮೊಗದ ಸವಿ ಮಾತಿಗಾಗಿ
ಎಷ್ಟು ಕರೆನ್ಸಿಯನ್ನು ಖರ್ಚು
ಮಾಡಿಕೊಂಡೆ.. ನೀನು..
ಒಂದು ಕರೆಯನ್ನಾದರೂ..
ಮಾಡುತ್ತಿರಲಿಲ್ಲ

ನನ್ನ ಗೆಳತಿಯರೆಂದು ಮಾಯಾಂಗನೆಯರಲ್ಲ
ಅವರು ನಿನ್ನ ಹಾಗೆಯೆ ಸುಶಿಕ್ಷಿತ
ಕುಟುಂಬದ ಹಿನ್ನಲೆಯಿಂದ
ಬಂದಿರುವಂತವರು...

ಇನ್ನೊಂದು ಹೆಣ್ಣಿನ ಬಗ್ಗೆ ಮಾತನಾಡುವ
ಮುನ್ನ ... ನೀನು ಒಂದು ಹೆಣ್ಣೆಂಬುದನು
ಮರೆಯಬೇಡ..

No comments:

Post a Comment