Thursday, May 18, 2017

ಹೋದವಳು

ನನ್ನೆದೆಯ ಹಾಜರಿಯಲ್ಲಿ..
ನಗುವೆಂಬ ಮೊದಲ ಸಹಿಯ
ಗೀಚಿ ಬಂದವಳು..

ಮನದ ಪುಸ್ತಕದಲ್ಲಿ..
ಅಳುವೆಂಬ ಕೊನೆಯ ಸಹಿಯ
ಕೊಟ್ಟು ಹೋದವಳು..

ಬಂದ ದಿನಗಳಲ್ಲಿ ತನ್ನೆಲ್ಲ
ಕನಸುಗಳ ಮನದ ಮಣ್ಣಿಗೆ
ಬಿತ್ತಿ ನಿಂತವಳು..

ಹೇಳದೆ ಹೋದ ದಿನಗಳಲ್ಲಿ..
ಮುಳ್ಳಿನ ವಿರಹದ ಬೇಲಿಯ
ಹಚ್ಚಿ ಹೋದವಳು..

ಮಳ್ಳಿಯ ಹಾಗೆ ಬಂದವಳು
ಮನಸಿನರಮನೆಯ ಕೋಣೆ..
ಕೋಣೆಗಳ ಸುತ್ತಿದವಳು...

ಕಳ್ಳಿಯ ಹಾಗೆ ಎಲ್ಲ... ಮನದ
ಸಿರಿಯ ಕದ್ದು ಪಾಳಿನರಮನೆಯಲ್ಲಿ
ನನ್ನನೊಬ್ಬನೆ ಕುಳ್ಳರಿಸಿ ಹೋದವಳು...

No comments:

Post a Comment