ನಾನಲ್ಲ ಭಾವವಿಲ್ಲದಾ... ಬಂಡೆ
ಇಟ್ಟು ನೋಡು ನಿನ್ನ ಸುಕೋಮಲ
ಕೈಯನೊಮ್ಮೆ.... ನನ್ನೆದೆಯ ಗುಂಡಿಗೆಯ
ಮೇಲೆ...
ರಾಮನಿಗಾಗಿ ಕಾದ ಶಬರಿಯಂತಾಗಿದೆ
ನನ್ನಿ... ತನು ಮನ
ಕಾಯುತಿವುದು ಮನವಿದು ನಿನ್ನೆರಡು
ನುಡಿಗಳಿಗಾಗಿ...
ಸಾಕು... ಬಿಡಿನ್ನು ಕುಕ್ಕಿ ತಿನ್ನುವ ಕಹಿ
ನೆನಪುಗಳ ಸುಟ್ಟು ಸುಟ್ಟು ನೀನೂ
ಬೇಯಬೇಡ ವಿರಹದಲಿ..
ಕಾಯಿಸಬೇಡ ನಿನ್ನ ಪ್ರೀತಿಯಲಿ
ಕೂಗಿಬಿಡು ಹಾಗೆ ಕಣ್ಮುಚ್ಚಿ..
ನಾನೊಬ್ಬನೆ ಎಷ್ಟೆಂದು ಕೂರಲಿಲ್ಲಿ
ನೀನಿಲ್ಲದ ಈ ಗಲ್ಲಿಯಲ್ಲಿ..
No comments:
Post a Comment