ಮರೆತು ಕೇಳಬೇಡ ನೀನು
ನನ್ನ ಯಾರೆಂದು!!
ಹೃದಯ ತೆರೆದು ನೋಡು
ಗೆಳೆಯ ನಾ ನಿನ್ನಲ್ಲೊಂದು!!
ನಾನು
ಮರೆತು ಮಾತನಾಡಲು..
ಉಡುವ ತೊಡುವ ಬಟ್ಟೆಯೆ..
ಬಣ್ಣ ಮಾಸಿದ ಮೇಲೆ ಮರೆಯಲು
ತೊರೆಯಲು...
ಯಾವಾಗಲಾದರೂ ನಡೆದು ಬಾ
ಈ ಗುಡಿಯೊಳಗೆ...
ಅದರ ಅಧಿ ದೇವತೆಯೆ ನೀನು..
ಅ
ಬೇರೊಂದು ಹೃದಯದಿ
ನೀ ಇದ್ದರೂ ನೋವಿಲ್ಲ!
ಆದರೆ ನಿನ ಹೃದಯದಿ ನಾ
ಇರದಿದ್ದರೆ ನಾನೆಂದೂ ಬದುಕಲ್ಲ!
ನಾನು
ತಪ್ಪು ತಿಳಿಯದಿರು ನಲ್ಲೆ...
ಬೇರೊಬ್ಬರ ಹೃದಯದಿ
ನಾನಿದ್ದರೆ... ಅದು ನನ್ನ
ತಪ್ಪಲ್ಲ...
ನಿನ್ನ ಬಿಟ್ಟು ಇನ್ನೊಬ್ಬರಿಗೆ ಈ
ಹೃದಯದಲ್ಲಿ ಜಾಗವಿಲ್ಲ..
ಈ ಮಾತಿಗೆ ನಾನೆಂದೂ...
ತಪ್ಪಿಲ್ಲ..
ಅ
ಹೇಗೆ ನಂಬಲಿ
ನಿನ್ನ ಈ ಹುಸಿ ಮಾತನ್ನು
ಭರವಸೆಯ ನುಡಿಯನ್ನೆ
ನುಡೆಯುವೆ ಯಾಕಿನ್ನು
ನಾ
ನಿನ್ನ ಮುಂದೆ ಹುಸಿಮಾತುಗಳ
ಆಡುವ ದರ್ಧು ನನಗೇನಿದೆ..
ಆಡಿದ ಮಾತುಗಳ ತಪ್ಪುವನೆಂಬುದ
ನಂಬುವ ಹಸಿ ಮನಸ್ಸು ನಿನ್ನದಿರಬಹುದು
ನನ್ನದಲ್ಲ..
ಇದು ಎಂದೆಂದಿಗೂ ನಿನ್ನೊಲವಿಗಾಗಿ
ಮೀಡಿಯುತಿರುವ ಹೃದಯ
ಅ
ಮಿಡಿಯುತಿರುವ ಹೃದಯವೇ
ಮತ್ತೆಕೆ ನನ್ನಿಂದ
ಆಗಾಗ ಮರೆಯಾಗುವೆ !!
ನನ್ನ ಪ್ರೀತಿಯಲ್ಲೆನು
ತಪ್ಪು ಕಂಡಿರುವೆ
ಅಪ್ಪಿಕೊಳ್ಳಲು ಬಂದರೆ
ಏಕೆ ದೂರ ಸರಿವೆ!!
ನಾ
ಅಪ್ಪಿಕೊಳ್ಳುವ ಸಮಯವಲ್ಲಿದು..
ಆ ಮನಸಿಗೊಂದು ಲಗಾಮು ಹಾಕು
ಪ್ರೀತಿಯರಳುವುದು ಮನಗಳಲಿ..
ಕಾಮವದು ತಣಿವುದು ತನುಗಳಲಿ..
ಮಿಡಿಯುತಿರಲಿ...ನನ್ನ ಹೆಸರಿನಲಿ
ನಿನ್ನ ಹೃದಯ.. ಬರುವ ರಾಗವದಲಿ ಆಲಿಸು
ನನ್ನೊಲವ ಗೀತೆಯ..
ಅ
ಅತಿಯಾದ ಪ್ರೀತಿ ಸ್ವಾರ್ಥಕ್ಕಲ್ಲ
ಅತಿಯಾದ ಸಲುಗೆ
ಮೋಹಕ್ಕಲ್ಲ ಗೆಳೆಯ
ತನ್ನವರನ್ನೆಲ್ಲ ಬಿಟ್ಟು
ನಿನ್ನನ್ನೇ ನಂಬಿ ಬಂದಿರುವುದು
ಈ ನನ್ನ ಹೃದಯ
ನಾ
ಅದು ಅಲ್ಲವೆ ನಮ್ಮಿಬ್ಬರ ಪ್ರೀತಿಯ
ಗೆಲುವು... ಒಬ್ಬರನ್ನೊಬ್ಬರು ಬಿಟ್ಟಿರಲಾರದಷ್ಟು
ಬಲವು ತುಂಬಿದೆ ನಮ್ಮಿಬ್ಬರ ಎದೆಗಳಲಿ..
ನನ್ನವರನ್ನೆಲ್ಲ ಬಿಟ್ಟು ನಿನ್ನ ಸುಂದರ
ಜಡೆಯ ಹಿಂದೆ ಬರಲು ಎಷ್ಟು..
ಕಾತರಿಸುತ್ತಿದೆ ಈ ಮನವು..
ಕೂಗಿ ನೋಡೊಮ್ಮೆ ಮನದಲಿ..
ಸಾಕು ನಿನ್ನ ಮನದ ಮಾತ ಕೇಳಿ
ಹಾರಿ ಬರುವೆನು ನಿನ್ನ ಪ್ರೀತಿಯ
ಮಡಿಲಿಗೆ..
ಅ
ಕೂಗಿ ಕೂಗಿ ಕರೆಯುವೆ ನಿನ್ನೆಸರನ್ನೆ
ಮತ್ತೆಂದು ಬಿಟ್ಟು ಹೋಗದಿರು ನನ್ನನ್ನೆ
ನಾ
ಬಿಟ್ಟು ಹೋಗಲು ನೀನೆನು... ಅರಳಿ
ಬಾಡಿ.. ಬಿದ್ದು ಹೋಗುವ ಸುಮವೆ...
ನನ್ನಂಗಳದ ಎದೆಯ ಬಳ್ಳಿಯಲ್ಲರಳಿದ
ಪ್ರೀತಿಯ ಕುಸುಮವು ನೀನು..
ನೀನಿಲ್ಲದೆ... ಈ ಹೃದಯದ ಲತೆಗೆ..
ಸೊಬಗುಂಟೆ... ಬದುಕುಂಟೆ
ಚೆಲುವೆ...
No comments:
Post a Comment