Saturday, May 6, 2017

ಕೈಕೊಟ್ಟು

ಬರೆಯುವೆ ಎರಡು ಸಾಲು
ಓದುವೆಯಾ ಮನವಿಟ್ಟು...

ಹೇಳುವೆ ನಾಲ್ಕು ಮಾತು
ಕೇಳುವೆಯಾ ಕಿವಿಗೊಟ್ಟು..

ಕೂಗುವೆ ಬೇಕೆಂದಾಗ
ಬರುವೆಯಾ ಓಗೊಟ್ಟು...

ನೋಡು ನನ್ನಲೊಮ್ಮೆ
ಕಣ್ಣಲಿ.... ಕಣ್ಣಿಟ್ಟು...

ಪ್ರೀತಿಸುವೆನೆಂದರೆ.........?
ಪ್ರೇಮಿಸುವೆಯಾ ಮನವಿಟ್ಟು

ಪ್ರೀತಿಯ ಮಧ್ಯದಲಿ
ಹೋಗುವುದಿಲ್ಲ ತಾನೆ ಕೈಕೊಟ್ಟು

No comments:

Post a Comment