ಗೆಳತಿ...
ನಿನ್ನ ನೆಪ್ಪನ್ನೊವು... ಕಾಮನ
ಹೋಳಿ ಕೆಂಡ ಆಗ್ಯಾವು......
ಹಗಲನ್ನೊಲ್ವು ....
ರಾತ್ರಿಯನ್ನೊಲ್ವು...
ಹಂಗ ನಿಗಿನಿಗಿಯಾಗಿ
ಸುಡುತಾವು......
ನೀ... ಬಿಟ್ಟ ಹೋದಿ ಅನ್ನೊದನ್ನ...
ಮರಿಯಾಕ... ಬೇವಿನ ಬೀಜದ
ರಸಾನ ಕುಡದ್ನಿ... ಕುಡದ ರಸಾ
ಸವಿಯಾತ ಹೊರ್ತು...ಬಿಟ್ಟ ಹೋದ
ನೆಪ್ ಮಾತ್ರ ಮತ್ತಷ್ಟು ಕಹಿಯಾತು..
ನಮ್ಮ ಪ್ರೀತಿ ಅನ್ನೋದು.. ಹಾಲಿನ
ಗಡ್ಗಿಗೆ ಹಾಕಿದ ಹೆಪ್ಪ ... ಇದ್ಹಂಗಿತ್ತು...
ಆವಾಗ... ಆವಾಗ.. ಕಡ್ದ....ಕಡ್ದ
ನಮ್ಮ ಪ್ರೀತಿ ಸಿಹಿ ಮಜ್ಗಿ ಕುಡ್ದ.. ಕುಡ್ದ
ಎದಿನ ತಂಪ ಮಾಡ್ಕೊತಿದ್ನಿ...
ನೀ ಏನ ಮಾಡಿಟ್ಟ ಹೋದಿ... ನಮ್ಮ
ಪ್ರೀತಿನ... ನಡು ನೀರನ್ಯಾಗ ಕೈ ಬಿಟ್ಟು
ಮಜ್ಗಿ ಗಡಗ್ಯಾಗ... ಕೊತ ಕೊತ ಕುದಿಯೋ..
ಸುಣ್ಣದ ನೀರಿನ ಪ್ರೀತಿ ಬ್ಯಾನಿ ತುಂಬಿಟ್ಟ..
ಹೊಂಟ ಹೋದೆಲ್ಲ.... ಇದನ್ನ ನಾ ಹ್ಯಾಗರ
ಕುಡಿಲಿ... ಹ್ಯಾಂಗರ ಬದುಕ್ಲಿ...
ನೀನ... ಇಲ್ಲ ಅಂದ ಮ್ಯಾಲ..
ಈ ಜೀವದಾಗ ಉಸಿರರ...
ಯಾಕ ಇಟ್ಕೊಳ್ಲಿ......
ಯಾಕ... ಇಟ್ಕೊಳ್ಲಿ...
No comments:
Post a Comment