Thursday, May 4, 2017

ಅವನು ನನ್ನವನು


ಕೈ ಬಳೆಗಳ
ಸದ್ದಿಲ್ಲದೆ
ಏಳದವನು...

ಮುಡಿಗೆ ಮಲ್ಲಿಗೆ
ಮುಡಿಸದೆ
ಮಾತನಾಡದವನು

ಈ ಬೆಳ್ಳಿ ಕಾಲ್ಗೆಜ್ಜೆಗಳ
ಸದ್ದಿಲ್ಲದೆ
ನಗಲಾರದವನು

ಈ ದುಂಡು ಮೊಗದ
ನಗುವ ನೋಡದೆ
ಹೊಸ್ತಿಲ ದಾಟದವನು

ಕೆನ್ನೆಯ ಮೇಲೆ ತುಂಟಾಟ
ಮಾಡುವ ಮುಂಗುರುಳನು
ಗದರಿಸುವವನು

ಮುತ್ತನು ಸುರಿಸುವ
ಈ ಅಧರಗಳಿಗೆ
ಮಧುವನು ತುಂಬುವನು

ಇವನು ನನ್ನವನು

No comments:

Post a Comment