Friday, May 19, 2017

ನೀಡಲಾರೆಯಾ ?

ತುಂಬಿಟ್ಟ ವಿರಹದ ಚೊಂಬನು
ಎಡಗಾಲಲಿ ಒದ್ದು...
ಪ್ರೀತಿಯ ತುಂಬಲು ಮನಕೆ
ಬಲಗಾಲಿಟ್ಟು ಬಾರೆಯಾ...

ಕರಿ ಹಲಗೆಯ ಮೇಲೆ
ಬರೆದ ಕಹಿ ನೆನಪುಗಳ
ಒರೆಸಿ...
ಹೊಸ ಬಳಪದೊಂದಿಗೆ
ಸವಿ ಕನಸುಗಳ
ಬರೆಯಲಾರೆಯಾ..

ಸಿಟ್ಟು ಸೆಡವಿನ ಪುಸ್ತಕವ
ಕಿತ್ತೊಗೆದು..
ಒಲವಿನ ಸಾಲುಗಳ ಬರೆದು
ಕೊಡಲಾರೆಯಾ..

ಮನದ ಮನೆಯ ಮೂಲೆಯಲಿ
ಕುಳಿತು...
ನಿನ್ನ ಹೆಸರನ್ನೆ ಜಪಿಸುತ್ತ ಕೂರುವಂತೆ
ಮಾಡಲಾರೆಯಾ..

ನೀ... ಬರೆದು ಕೊಟ್ಟ ಸಾಲುಗಳ
ನಿನ್ನೆದುರು ನಿಂತು..
ನಿನ್ನ ಮನಕೆ ಇಂಪಾಗುವಂತೆ ಹೇಳುವ
ಅವಕಾಶವನೊಂದು... ಮರಳಿ
ನೀಡಲಾರೆಯಾ ?

No comments:

Post a Comment