Saturday, May 6, 2017

ನಂ... ಮಾವ

ನಂ...ಮಾವ

ಅದೇನೊ ಗೊತ್ತಿಲ್ಲ...
ಈ ಚಿಗುರು ಮೀಸೆ ಚೆಲುವನ್ನ
ನೋಡದ್ಯಾಗೆಲ್ಲ....
ಹಗ್ಗ ಹರಕೊಂಡ... ಚಿನ್ನಾಟ
ಆಡೊ ಆಕಳ ಕರ ಆದಂಗ ಆಕೈತಿ..

ಮನಸ... ಎಮ್ಮೆ ಹಾಲ ಹಿಂಡುವಾಗ
ಚರಗಿ ತುಂಬ... ತುಂಬಿ ಬರೋ..
ಹಾಲಿನ ನೊರೆಯಾಗೈತೆ..

ಅವನ ಮಾತ.... ಮೇವು
ಮಾಡೋ ಚೆನ್ನಕ್ಕ ಗರತಿ
ಹಾಡ.. ಹಾಡುವಷ್ಟು ಇಂಪಾಗಿರತೈತಿ

ಇಮಾಮಜ್ಜ ತೊಡ್ಸೊ....ಹಸಿರ
ಬಳಿಯೊಳಗಿನ ಝಲ ಝಲ
ಅನ್ನೋ ಶಬ್ದದೊಳಗ ಅವನ..
ನಗುವ ಕೇಳ್ದಂಗಾಕೈತಿ...

ಬಾವಿ ನೀರ ಸೇದಿ... ನಡುದ ಮ್ಯಾಲಿನ
ಕೊಡದನ ನೀರು ತುಳುಕುವಾಗ....
ಅವನ ಕೈನ ನನ್ನ ನಡುವ ಸವರೈತಿ
ಅನ್ಸೈತಿ..

ಇಡೀ... ದುಂಡ ಮಲ್ಗಿ...ಹೂವಿನ
ಪುಟ್ಟಿನ ಎದುರಗಿಟ್ರೂ... ಇವುಗಳ
ವಾಸ್ನಿಗಿಂತ... ಅವನ ಪ್ರೀತಿ ವಾಸ್ನಿನ..
ಹೆಚ್ಚು ಸೆಳಿತೈತಿ...

ಅದೇನ... ಏನ.. ಒಟ್ಟ ಗೊತ್ತಾಗವಲ್ದ
ಆ ಚಿಗುರು ಮೀಸೆ ಚೆಲುವ ಕಂಡ್ರ
ನನ್ನ ಮನಸ್ಸಿದು ಗಾಳಿಗೆ ಸಿಕ್ಕ...
ದಾವಣಿ ಆಗತೈತಿ..... ಎಲ್ಲೂ...
ಕೈಗ ಸಿಗಲಾರ್ದಂಗ ಹಾರಿ...
ಹಾರಿ... ಹೋಕೈತಿ.

No comments:

Post a Comment