Sunday, May 7, 2017

ನಾನು ನನ್ನ ಕನಸು


ನಾನೇ  ಸೋತು ಹೋಗುವೆ
ಅವನ  ನೆನಪುಗಳಿಗೆ
ಕಡಲ ತೀರಗಳಿಗೆ
ಬಾನ  ಚುಕ್ಕಿಗಳಿಗೆ
ಅವನನ್ನ  ನೆನಪಿಸದಿರಿ
ಎಂದು ಹೇಳುವ  ನೆಪದಲ್ಲಿ  
ಮತ್ತೆ  ಮತ್ತೆ  ನಾನೇ 
ನೆನೆಯುವೆ ,
ನಾನೇ ಅವನ ನೆನಪುಗಳಿಗೆ
ಸೋತು  ಬಿಡುವೆ


ನಾನೆ ಕಳೆದು ಹೋಗುವೆ
ಅವಳ ನೆನಪುಗಳ ಒನಪುಗಳಿಗೆ
ತರುವಿನ ತಂಗಾಳಿಗೆ
ನಭದ ನೀಲಾಗಸಕೆ
ನಗುವ ಹೂಗಳಿಗೆ
ಅವಳ ನೆನೆಯದಂತೆ
ಮಾಡದಿರಿ...
ಎನ್ನುತಾ..... ಎನ್ನುತಾ
ಅವಳ ನೆನಪಿನ ಹೊಳೆಯಲ್ಲೆ
ತೇಲಿ ಹೋದೆನು..

No comments:

Post a Comment