Thursday, May 4, 2017

ವಿರಹದ ಪಾಲು

ನಾಲ್ಕೆ... ನಾಲ್ಕು ದಿನ ಅವನಿಲ್ಲದ
ದಿನಗಳ ಹೊತ್ತುಗಳು.... ಒಡೆದ ಬಿದ್ದ
ಮುತ್ತುಗಳಾಗಿವೆ..
ಹೇಳಿಕೊಳ್ಳಲಾಗದ ಮನಸಿನ ಮಾತುಗಳು
ನರಳಿ ನರಳಿ ನಡುಗಂಟಲಲೆ ಉಸಿರು ಗಟ್ಟಿವೆ..
ವಿರಹವದೇಷ್ಟು ಬೇಡುತಿದೆ ನನ್ನ ಬಾಳಿನ
ಪಾಲು....

ಮದುವೆಯಾದ ಹೊಸತರಲ್ಲೆ..
ಅವನೊಂದಿಗೆ ಕಾನನದ ಪಾಲು
ಬಸಿರ ಉಸಿರು ಹಸಿರಾಗುವ
ಮೊದಲೆ ಮತ್ತೆ...ಅರಣ್ಯದ ಪಾಲು
ಭೂಗರ್ಭದ ಮಗಳಾದರೂ...
ಏಕಪತ್ನಿ ವ್ರತಸ್ತ ಎಂಬ ಮರ್ಯಾದ
ಪುರುಷೋತ್ತಮನ ಮಡದಿಯಾದರೂ...
ಸೀತೆಯ ಬಾಳಿಗೆ ವಿರಹವೆಂದೂ ನೀಡಲಿಲ್ಲ
ಸಂತಸದ ಪಾಲು...

No comments:

Post a Comment